ಬೆಳಗಾವಿ ನವರಾತ್ರಿ ನಿಮಿತ್ತ ಒಂಬತ್ತು ದಿನಗಳ ಕಾಲ ದೇವಿ ಆರಾಧನೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಭಕ್ತಾದಿಗಳು ದೇವಿಯ ಆರಾಧನೆ ವಿವಿಧ ರೂಪಗಳಲ್ಲಿ ಸ್ವರೂಪಗಳಲ್ಲಿ ಆರಾಧನೆ ಮಾಡಲಾಗುತ್ತಾ ಇದೆ.
ಬಿಜೆಪಿ ನಾಯಕ ನಾಗರಾಜ್ ಪಾಟೀಲ್ ಆಯೋಜಿಸಿದ ರಾಜ್ ಉತ್ಸವ ಗರ್ಭ ಸ್ಫರ್ಧೆ ಬೆಳಗಾವಿ ಫೀನಿಕ್ಸ್ ಸ್ಕೊಲ್ ರಾಮದೇವ್ ಹತ್ತಿರ ಮೈದಾನದಲ್ಲಿ ಅಕ್ಟೋಬರ್ 17, 18, 19,ರಂದು ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದ್ದು
ಅತಿ ಆಕರ್ಷಿಕ ಮೈದಾನ ಹಾಗೂ ಸೌಂದರ್ಯ ಲೈಟಿಂಗ್ ಹಾಗೂ ಉಸ್ಕೃಷ್ಟ ಮ್ಯೂಸಿಕ್ ಸಿಸ್ಟಮ್ ಗರ್ಭ ಆಡಲು ಸುಂದರವಾದ ಮೈದಾನವನ್ನು ತಯಾರಿಸಲಾಗಿದೆ. ಗರ್ಭ ಸ್ಪರ್ಧೆ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಅವರು ದುರ್ಗಾ ಮಾತೆ ಪೂಜೆ ನೆರವೇರಿಸಿದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಇದೇ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕ ಯುವತಿಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಗರ್ಭ ನೃತ್ಯವನ್ನು ದೇವಿ ಆರಾಧನೆಗೆ ಹೆಜ್ಜೆ ಹಾಕಿದರು
ಕಾರ್ಯಕ್ರಮದ ಆಯೋಜಕ ನಾಗರಾಜ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಮ್ಮ ಸಂಸ್ಕೃತಿ ಹಾಗೂ ಪರಂಪರಿಕ ಸಂಪ್ರದಾಯಗಳು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಇಂತಹ ಕಾರ್ಯಕ್ರಮದ ದಿಂದ ಸಮಾಜ ಮತ್ತು ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಸಹಕಾರಿ ಆಗಲಿದೆ ಮತ್ತು ನವರಾತ್ರಿ ನಿಮಿತ್ತ ಗರ್ಭ ಆಯೋಜನೆಯ ಲಾಭ ಪಡೆದುಕೊಳ್ಳಬೇಕು ಇಲ್ಲಿ ಎಲ್ಲಾ ಸೌಕರ್ಯಗಳನ್ನು ಇಡಲಾಗಿದೆ ಮೂರು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಿದ್ದು ಬೆಳಗಾವಿ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು
ಕಾರ್ಯಕ್ರಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ನಾಯಕಿ ಉಜ್ವಲ ಬಡವನೇ, ಲಿಂಗರಾಜ್ ಪಾಟೀಲ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಯುವಕ ಯುವತಿಯರು ಹಾಗೂ ಕುಟುಂಬದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

