LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

*ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಮೃಣಾಲ್ ಹೆಬ್ಬಾಳ್ಕರ್ ಅಂತಿಮ ನಮನ*

 

ಗೋವಾ: ಖ್ಯಾತ ನಟ, ಹಿರಿಯ ಕಲಾವಿದ ದಿವಂಗತ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಬೆಳಗಾವಿಯ ಯುವ ಕಾಂಗ್ರೆಸ್ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಅಂತಿಮ ನಮನ ಸಲ್ಲಿಸಿ, ಗೌರವ ಅರ್ಪಿಸಿದರು.

ಗೋವಾದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದ್ದ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಮೃಣಾಲ್ ಹೆಬ್ಬಾಳ್ಕರ್ ಅವರು, ಅಗಲಿದ ಹಿರಿಯ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಾನಾ ಪಾಟೇಕರ್ ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ, ವಿಶೇಷವಾಗಿ ಅವರ ಅಭಿಮಾನಿಗಳಿಗೆ ಅಪಾರ ನಷ್ಟವಾಗಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡಣ್ಕರ್, ಯುರಿ ಅಲೆಮಾವೊ, ನಿಶಾಂತ್ ಆನಂದ್, ಅರ್ಚಿತ್ ನಾಯಕ್ ಹಾಗೂ ವರದಾ ಮರಾಸೋಲ್ಕರ್ ಉಪಸ್ಥಿತರಿದ್ದರು.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಕಾಕತಿ ರಾಣಿ ಚೆನ್ನಮ್ಮ ಕೋಟೆ ಅಭಿವೃದ್ಧಿಗೆ ಪರ್ಯಾಯ ಜಾಗದ ಚಿಂತನೆ: ಸಚಿವ ಸತೀಶ ಜಾರಕಿಹೊಳಿ* ಅರಣ್ಯ ಇಲಾಖೆಯ ವ್ಯಾಪ್ತಿಯಿಂದಾಗಿ ಅಭಿವೃದ್ಧಿಗೆ ಅಡ್ಡಿ; ಪರ್ಯಾಯ ಜಾಗ ಲಭ್ಯವಾದರೆ ಮುಂದಿನ ಕ್ರಮದ ಬಗ್ಗೆ ಚಿಂತನೆ**ಕಾಂಗ್ರೆಸ್‌ನಲ್ಲಿ ವೈಶಾಲಿ ಸುತಾರ್‌ಗೆ ಮಹತ್ವದ ನೇಮಕಾತಿ; ಮಹಿಳಾ ಪದಾಧಿಕಾರಿಗಳಿಂದ ಸನ್ಮಾನ**ಬೆಳಗಾವಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ**ಅದ್ದೂರಿ ಇಂದ ಚಾಲನೆಯಾದ ರಾಸ ಉತ್ಸವ**ನವರಾತ್ರಿ ಸಂಭ್ರಮ: ಕಂಗ್ರಾಳಿ ಕೆ.ಎಚ್. ಮತ್ತು ಹಿಂಡಲಗಾದಲ್ಲಿ ದೇವಿಯ ವಿಶೇಷ ಪೂಜೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿ**ರಾಜಕೀಯ ತಂತ್ರಗಾರಿಕೆ, ಸಮೀಕ್ಷೆ ಹಾಗೂ ಪ್ರಚಾರ ಸೇವೆ ಒಂದೇ ವೇದಿಕೆಯಲ್ಲಿ; ಬೆಳಗಾವಿಯಲ್ಲಿ ‘STRATAGEM Matrix’ ಶಾಖೆ ಉದ್ಘಾಟನೆ**ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಬೆಳಗಾವಿ ಕ್ರೀಡಾಪಟುಗಳ ಸಾಧನೆ; 2 ಚಿನ್ನ ಸೇರಿ 6 ಪದಕಗಳ ಬೇಟೆ!**ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಮೃಣಾಲ್ ಹೆಬ್ಬಾಳ್ಕರ್ ಅಂತಿಮ ನಮನ*बेळगावमध्ये माजी सैनिकांचा मेळावा; ५,२३० जण सहभागी, ७२८ रोजगार संधी*ಕರ್ನಾಟಕದಲ್ಲಿ ಜಿಲ್ಲಾ–ತಾಲೂಕು ಪಂಚಾಯಿತಿ ಚುನಾವಣೆ ಸಿದ್ಧತೆ ಚುರುಕು; ಮೀಸಲಾತಿ ಅಧಿಸೂಚನೆ ಪ್ರಕಟ*