19/02/2025 ರಂದು ವೇಳೆ. 13:30 ಗಂಟೆಗೆ ಶ್ರೀ ಶ್ರೀಶೈಲ್ ದತ್ತಾತ್ರೇಯ ಗುರುವ, (29) ಸಾ: ತೋಪಿನಕಟ್ಟಿ ತಾ: ಖಾನಾಪೂರ ಜಿ: ಬೆಳಗಾವಿ ಇವರು ಮಾರ್ಕೇಟ ಪೊಲೀಸ್ ಠಾಣೆ ಹಾಜರಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 34/2025 ಕಲಂ 318(4), 319(2), 336(2), 336(3), 339 222 2023 ៨ ស ಕೈಕೊಂಡಿದ್ದು ಇತ್ತು.
ಸದರ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯ ಕೈಕೊಂಡು ಆರೋಪಿತನಾದ ರಾಮಚಂದ್ರ ವೆಂಕಟೇಶ ದೇಶಪಾಂಡೆ, (75) ಸಾ; ಪಾಟೀಲ ಗಲ್ಲಿ, ಕೋಟಬಾಗಿ, ತಾ:ಹುಕ್ಕೇರಿ, ಜಿಲ್ಲೆ: ಬೆಳಗಾವಿ ಇವನಿಗೆ ವಶಕ್ಕೆ ಪಡೆದುಕೊಂಡು ಸದರ ಪ್ರಕರಣದಲ್ಲಿ ಕೂಲಂಕುಷವಾಗಿ ವಿಚಾರಣೆ ಕೈಕೊಂಡಿದ್ದು, ಪ್ರಕರಣದಲ್ಲಿಯ ಪಿರ್ಯಾದಿಯ ಅಜ್ಜ ಮಶನು ಜಾಯಪ್ಪ ಗುರವ ಹಾಗೂ ಈತನ ಸಹೋದರು ಸಮಾಯಕದಲ್ಲಿ ಸನ್ 1998 ರಲ್ಲಿ ಶ್ರೀ ಚಿದಂಬರ ಶ್ರೀಪಾದ ಕುಲಕರ್ಣಿ ಹಾಗೂ ರಮೇಶ ದಿಗಂಬರ ಕುಲಕರ್ಣಿ ಇವರ ಕಡೆಯಿಂದ ಬಡಾಲ ಅಂಕಲಗಿ ಗ್ರಾಮದ ಹದ್ದಿಯಲ್ಲಿರುವ ಸರ್ವೇ ನಂಬರ: 340 ಕ್ಷೇತ್ರ 7 ಎಕರೆ 32 ಗುಂಟೆ ಜಮೀನವನ್ನು ಖರೀದಿ ಮಾಡಿಕೊಂಡು ಖಬ್ಬಾವಹೀವಾಟಿನಲ್ಲಿ ಇದ್ದರೂ ಕೂಡ ಇದರಲ್ಲಿ ಆರೋಪಿತನಾದ ರಾಮಚಂದ್ರ ವೆಂಕಟೇಶ ದೇಶಪಾಂಡೆ ಈತನು ಸದರಿ ಜಮೀನದ ಮೂಲ ಮಾಲೀಕರು ಮರಣ ಹೊಂದಿದ್ದರೂ ಕೂಡ ಮೃತ ಚಿದಂಬರ ಶ್ರೀಪಾದ ಕುಲಕರ್ಣಿ ಇವರ ಹೆಸರಿನಲ್ಲಿ ತಾನೇ ಆಸ್ತಿಯ ಮಾಲೀಕ ಅಂತಾ ಹೇಳಿ ಬೆಳಗಾವಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಕುಳಿತು ವೆಬ್ ಕ್ಯಾಮರಾದಲ್ಲಿ ಪೋಟೊ ಕ್ಲಿಕ್ಕಿಸಿಕೊಂಡು ಹೆಬ್ಬೆರಳಿನ ಸಹಿ ಮಾಡಿ ಆಸ್ತಿಯನ್ನು ಪ್ರಕರಣದಲ್ಲಿಯ ಇನ್ನೂಳಿದ ಆರೋಪಿತರಿಗೆ ಅಗ್ರಿಮೆಂಟ ಆಫ್ ಸೆಲ್ ಮಾಡಿ ಫಿರ್ಯಾದಿಗೆ ಮೋಸ ವಂಚನೆ ವೆಸಗಿದ ಬಗ್ಗೆ ತನಿಖೆಯಲ್ಲಿ ದೃಡಪಟ್ಟಿರುತ್ತದೆ. ಕಾರಣ ಸದರಿಯವನಿಗೆ ದಿನಾಂಕ: 11/08/2026 ರಂದು ದಸ್ತಗೀರ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಪ್ರೇರೆಪಿಸಿದ ಇನ್ನೊರ್ವ ಆರೋಪಿ ವಿನೋದ ದೇಶಪಾಂಡೆ ಹಾಗೂ ಇನ್ನುಳಿದ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದ್ದು ಇರುತ್ತದೆ.
ಸದರ ಪ್ರಕರಣದ ಕಾರ್ಯಾಚರಣೆಯಲ್ಲಿ ಶ್ರೀ ಜೆ ಎಮ್ ಕಾಲಿಮಿರ್ಚಿ, ಪಿಐ, ಮಾರ್ಕೇಟ ಪೊಲೀಸ್ ಠಾಣೆ ಬೆಳಗಾವಿ ನಗರ, ಹಾಗೂ ಶ್ರೀ ಹೆಚ್ ಎಲ್ ಕೆರೂರ, ಪಿಎಸ್‌ಐ, ಮತ್ತು ಸಿಬ್ಬಂದಿ ಜನರ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.









