LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

*ಪರ್ಪೆಚುವಲ್ ಲೀಸ್ ಆಸ್ತಿ ನೋಂದಣಿ ಸಮಸ್ಯೆ ಶೀಘ್ರ ಪರಿಹಾರ: ಕ್ರೆಡಾಯ್ ನಿಯೋಗಕ್ಕೆ ಐಜಿಆರ್ ಭರವಸೆ*

ಬೆಳಗಾವಿ: ಪರ್ಪೆಚುವಲ್ ಲೀಸ್ (ಶಾಶ್ವತ ಗುತ್ತಿಗೆ) ಆಸ್ತಿಗಳಿಗೆ ಸಂಬಂಧಿಸಿದಂತೆ ಬಹುಕಾಲದಿಂದ ಬಾಕಿ ಉಳಿದಿರುವ ನೋಂದಣಿ ಹಾಗೂ ವಹಿವಾಟು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ಕರ್ನಾಟಕ ಸರ್ಕಾರದ ನೋಂದಣಿ ಮಹಾನಿರೀಕ್ಷಕರು (IGR) ಮುಲ್ಲೈ ಮುಹಿಲನ್ ನೀಡಿದ್ದಾರೆ.

ಈ ಸಂಬಂಧ ಬೆಳಗಾವಿ ಕ್ರೆಡಾಯ್ ತಂಡವು ಕರ್ನಾಟಕ ಸರ್ಕಾರದ IGR ಮುಲ್ಲೈ ಮುಹಿಲನ್ ಅವರನ್ನು ಭೇಟಿಯಾಗಿ, ಪರ್ಪೆಚುವಲ್ ಲೀಸ್ ಆಸ್ತಿಗಳಿಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿತು. ಈ ಸಂದರ್ಭದಲ್ಲಿ AIGR (ಕಂಪ್ಯೂಟರ್) ಮಧುಸೂಧನ ಅವರು ಉಪಸ್ಥಿತರಿದ್ದರು.

ಪರ್ಪೆಚುವಲ್ ಲೀಸ್ ಆಸ್ತಿಗಳ ವಹಿವಾಟು ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯಿಂದಾಗಿ ಆಸ್ತಿ ಮಾಲೀಕರು, ನಿರ್ಮಾಪಕರು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದವರು ಹಲವು ದಿನಗಳಿಂದ ತೊಂದರೆ ಅನುಭವಿಸುತ್ತಿರುವುದನ್ನು ಕ್ರೆಡಾಯ್ ನಿಯೋಗವು ಐಜಿಆರ್ ಅವರ ಗಮನಕ್ಕೆ ತಂದಿತು.

ಸಮಸ್ಯೆಯ ಕುರಿತು ಈಗಾಗಲೇ ಸಂಪೂರ್ಣ ಅರಿವು ಹೊಂದಿರುವುದಾಗಿ ತಿಳಿಸಿದ IGR ಮುಲ್ಲೈ ಮುಹಿಲನ್, ಅಗತ್ಯ ವಹಿವಾಟುಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಕಾವೇರಿ (CAVERI) ಸಾಫ್ಟ್‌ವೇರ್‌ನಲ್ಲಿ ಹೊಸ ಆಯ್ಕೆಯನ್ನು (ಆಪ್ಷನ್) ಸೇರ್ಪಡೆಗೊಳಿಸಲು ಅಗತ್ಯ ಅನುಮತಿಯನ್ನು ಈಗಾಗಲೇ ಪಡೆಯಲಾಗಿದೆ ಎಂದು ತಿಳಿಸಿದರು.

ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ಭರವಸೆ ನೀಡಿದರು. 
ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ಸಕಾರಾತ್ಮಕ ಸುದ್ದಿ ಹೊರಬರುವ ನಿರೀಕ್ಷೆಯಿದೆ ಎಂದು ಕ್ರೆಡಾಯ್ ತಂಡ ತಿಳಿಸಿದೆ.
ಪರ್ಪೆಚುವಲ್ ಲೀಸ್ ಆಸ್ತಿಗಳ ಸಮಸ್ಯೆ ಬಗೆಹರಿದರೆ, ಸಂಬಂಧಿತ ಆಸ್ತಿಗಳ ವಹಿವಾಟು ಮತ್ತು ನೋಂದಣಿ ಪ್ರಕ್ರಿಯೆ ಸುಗಮವಾಗಲಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದವರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.

 ಹೀಗಾಗಿ ಐಜಿಆರ್ ನೀಡಿರುವ ಭರವಸೆ ಬೆಳಗಾವಿಯ ರಿಯಲ್ ಎಸ್ಟೇಟ್ ವಲಯದಲ್ಲಿ ಆಶಾಭಾವನೆ ಮೂಡಿಸಿದೆ.

ಭೇಟಿಯಲ್ಲಿ ಕ್ರೆಡಾಯ್ ಅಧ್ಯಕ್ಷ ಯುವರಾಜ್ ಹುಲ್ಜಿ, ಪ್ರಶಾಂತ್ ವಾಂಡಕರ್, ಸುಧೀರ್ ಪನಾರೆ, ಅಮರ್ ಅಕ್ನೋಜಿ, ಸಚಿನ್ ಬೈಲವಾಡ್, ಪ್ರಶಾಂತ್ ಪಾಟೀಲ, ವೀರೇಶ್ ಶೆಟ್ಟಣವರ, ರಾಜೇಶ್ ಮಾಳಿ, ರಾಜೇಂದ್ರ ಮುತಗೆಕರ್ ಹಾಗೂ ಡಿ.ಎ. ಸಾಯನೇಕರ ಉಪಸ್ಥಿತರಿದ್ದರು.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ**ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ವೇಗ: ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲನೆ**ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಿಜೆಪಿ ಪ್ರತಿಭಟನೆ; ಪಂತ ಬಾಳೇಕುಂದ್ರಿ ವಿದ್ಯುತ್ ಕೇಂದ್ರದ ಎದುರು ರಸ್ತೆ ತಡೆ**₹65 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ನಿರ್ಮಾಣ ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ**ಗಣೇಶೋತ್ಸವದಲ್ಲಿ ಅಂಗಡಿಗಳನ್ನು ರಾತ್ರಿ 12 ಗಂಟೆಯವರೆಗೆ ತೆರೆಯಲು ಅನುಮತಿ**ಬೆಳಗಾವಿ ಕಾಂಗ್ರೆಸ್‌ನಲ್ಲಿ ಮಹತ್ವದ ಸಂಘಟನಾತ್ಮಕ ಬದಲಾವಣೆ; ಗ್ರಾಮೀಣ ಅಧ್ಯಕ್ಷರಾಗಿ ಬಸವರಾಜ ಶೇಡಗಾವಿ, ನಗರ ಸಾರಥ್ಯ ರಾಜಾ ಸಲೀಂಗೆ**ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣದಿಂದ ‘ಗುರು ಗೌರವ’; ಆರ್ಥಿಕ ಸಾಕ್ಷರತೆ, ಆರೋಗ್ಯ ಜಾಗೃತಿ ಕಾರ್ಯಕ್ರಮ**ಉದ್ಯಮಬಾಗ್ ಪೊಲೀಸರ ಭರ್ಜರಿ ಕಾರ್ಯಾಚರಣೆ; ವಾಹನ ಕಳ್ಳತನ ಪ್ರಕರಣದ ಆರೋಪಿ ಬಂಧನ, ₹2.65 ಲಕ್ಷ ಮೌಲ್ಯದ ವಾಹನ ಜಪ್ತಿ**ಇಡಿ ಕ್ರಮ ಖಂಡಿಸಿ ಹಿರೇಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಪರಶುರಾಮ್ ಪೂಜಾರಿ ನೇತೃತ್ವದಲ್ಲಿ ಧರಣಿ**ಇಡಿ ಶೋಧ ಪೂರ್ಣ; ಸತೀಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಕಾಣಿಸಿಕೊಂಡರು; ಘೋಷಣೆಗಳಿಂದ ಮೊಳಗಿದ ಪರಿಸರ*