LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Politics News

*ಬಾಚಿ, ಸುಳಗಾ ಗ್ರಾಮಗಳಿಗೆ ಆಟದ ಮೈದಾನ, ಕೆರೆ: ಲಕ್ಷ್ಮೀ ಹೆಬ್ಬಾಳಕರ್ ಮಹತ್ವದ ಹೆಜ್ಜೆ*

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಲಾ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕ್ಷೇತ್ರದ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಗ್ರಾಮಸ್ಥರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಿರುವ ಅವರು, ಬಾಚಿ ಹಾಗೂ ಸುಳಗಾ ಗ್ರಾಮಗಳಲ್ಲಿ ಆಟದ ಮೈದಾನ ಮತ್ತು ಸಾರ್ವಜನಿಕ ಕೆರೆ ನಿರ್ಮಾಣಕ್ಕೆ ಅಗತ್ಯವಿರುವ ಸರ್ಕಾರಿ ಜಮೀನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಬುಧವಾರ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮಗಳಲ್ಲಿನ ಸಾರ್ವಜನಿಕ ಅಗತ್ಯಗಳು ಹಾಗೂ ಗ್ರಾಮಸ್ಥರ ಮನವಿಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು. ಚರ್ಚೆಯ ಬಳಿಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸರ್ಕಾರಿ ಜಮೀನು ಹಸ್ತಾಂತರಿಸುವ ಕುರಿತು ಅಧಿಕೃತ ಆದೇಶಗಳನ್ನು ಪಡೆದುಕೊಂಡರು.

ಬಾಚಿ ಶಾಲೆಗೆ 3 ಎಕರೆ ಜಮೀನು
ಬಾಚಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿರುವುದನ್ನು ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ್ ಅವರ ಗಮನಕ್ಕೆ ತಂದಿದ್ದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜತೆಗೆ ಅವರ ದೈಹಿಕ ಹಾಗೂ ಕ್ರೀಡಾ ಪ್ರತಿಭೆ ಬೆಳೆಸಲು ಆಟದ ಮೈದಾನ ಅತ್ಯಗತ್ಯವಾಗಿರುವುದನ್ನು ಮನಗಂಡ ಶಾಸಕರು, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಈ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ್ದರು.

ಇದೀಗ ಬಾಚಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನ ನಿರ್ಮಾಣಕ್ಕಾಗಿ 3 ಎಕರೆ ಕಂದಾಯ ಇಲಾಖೆಯ ಜಮೀನನ್ನು ಶಿಕ್ಷಣ ಇಲಾಖೆಗೆ ಮಂಜೂರು ಮಾಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಜಮೀನು ಮಂಜೂರಾತಿ ಆದೇಶವನ್ನು ಪಡೆದುಕೊಳ್ಳಲಾಗಿದೆ.

ಇದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಕ್ರಿಕೆಟ್, ಕಬಡ್ಡಿ, ಖೋ-ಖೋ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ವಿಶಾಲ ಮೈದಾನ ದೊರೆಯಲಿದೆ. ಶಾಲೆಯ ಶೈಕ್ಷಣಿಕ ವಾತಾವರಣದ ಜತೆಗೆ ಮಕ್ಕಳ ಸಮಗ್ರ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ.

ಸುಳಗಾದಲ್ಲಿ ಆಟದ ಮೈದಾನ, ಸಾರ್ವಜನಿಕ ಕೆರೆಗೆ ಜಾಗ
ಇದೇ ವೇಳೆ ಸುಳಗಾ ಗ್ರಾಮದ ಮತ್ತೊಂದು ಬಹುಕಾಲದ ಬೇಡಿಕೆಯೂ ಈಡೇರಿದೆ. ಗ್ರಾಮದಲ್ಲಿ ಸಾರ್ವಜನಿಕರಿಗೆ ಹಾಗೂ ಯುವಕರಿಗೆ ಅನುಕೂಲವಾಗುವಂತೆ ಆಟದ ಮೈದಾನ ನಿರ್ಮಿಸುವುದು ಮತ್ತು ಸಾರ್ವಜನಿಕ ಕೆರೆಯೊಂದನ್ನು ನಿರ್ಮಿಸುವುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿತ್ತು.

ಈ ಹಿನ್ನೆಲೆಯಲ್ಲಿ 4 ಎಕರೆ ಜಮೀನನ್ನು ಸಾರ್ವಜನಿಕ ಆಟದ ಮೈದಾನ ನಿರ್ಮಾಣಕ್ಕಾಗಿ ಹಾಗೂ 2 ಎಕರೆ ಜಮೀನನ್ನು ಸಾರ್ವಜನಿಕ ಕೆರೆ ನಿರ್ಮಾಣಕ್ಕಾಗಿ ಬೆಳಗಾವಿ ತಾಲೂಕು ಪಂಚಾಯತಿಗೆ ಮಂಜೂರು ಮಾಡುವ ಅಧಿಕೃತ ಆದೇಶವನ್ನು ಲಕ್ಷ್ಮೀ ಹೆಬ್ಬಾಳಕರ್ ಪಡೆದುಕೊಂಡಿದ್ದಾರೆ.

ಸುಳಗಾ ಗ್ರಾಮದ ಯುವಕರು ಮತ್ತು ಸಾರ್ವಜನಿಕರಿಗೆ ಈ ಜಮೀನು ಮಂಜೂರಾತಿ ಬಹಳಷ್ಟು ಅನುಕೂಲ ಕಲ್ಪಿಸಲಿದೆ. ಗ್ರಾಮದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ವೇದಿಕೆ ನಿರ್ಮಾಣವಾಗುವುದರ ಜತೆಗೆ, ಸಾರ್ವಜನಿಕ ಕೆರೆ ನಿರ್ಮಾಣದಿಂದ ಸ್ಥಳೀಯ ಅಗತ್ಯಗಳಿಗೂ ನೆರವಾಗುವ ನಿರೀಕ್ಷೆಯಿದೆ.

ಗ್ರಾಮೀಣ ಮಕ್ಕಳ ಸಮಗ್ರ ಅಭಿವೃದ್ಧಿಗೆ ಆದ್ಯತೆ
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಆಟದ ಮೈದಾನಗಳ ಕೊರತೆ ಇನ್ನೂ ಹಲವೆಡೆ ಕಂಡುಬರುತ್ತಿದೆ. ತರಗತಿ ಕೊಠಡಿಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಕ್ರೀಡೆ, ದೈಹಿಕ ಚಟುವಟಿಕೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಅಗತ್ಯವಾದ ಮೂಲಸೌಕರ್ಯ ದೊರೆಯುವುದು ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಮುಖ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಬಾಚಿ ಗ್ರಾಮದ ಶಾಲೆಗೆ 3 ಎಕರೆ ಜಮೀನು ಮಂಜೂರು ಮಾಡಿಸಿರುವುದು ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ಅದೇ ರೀತಿ ಸುಳಗಾದಲ್ಲಿ ಸಾರ್ವಜನಿಕ ಆಟದ ಮೈದಾನ ನಿರ್ಮಾಣವಾಗುವುದರಿಂದ ಗ್ರಾಮದ ಯುವಕರು ಹಾಗೂ ಕ್ರೀಡಾಸಕ್ತರಿಗೆ ಅನುಕೂಲವಾಗಲಿದೆ.

ಸಾರ್ವಜನಿಕ ಅಗತ್ಯಗಳನ್ನು ಗುರುತಿಸಿ, ಲಭ್ಯವಿರುವ ಸರ್ಕಾರಿ ಜಮೀನನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಜಮೀನು ಮಂಜೂರಾತಿಗಳು ಮಹತ್ವದ ಬೆಳವಣಿಗೆಯಾಗಿವೆ.

ಗ್ರಾಮಸ್ಥರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಿ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ, ಅಗತ್ಯ ಅನುಮೋದನೆ ಮತ್ತು ಅಧಿಕೃತ ಆದೇಶಗಳನ್ನು ಪಡೆದುಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಕ್ರಮದಿಂದ ಬಾಚಿ ಹಾಗೂ ಸುಳಗಾ ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.

ಶಾಲಾ ಮಕ್ಕಳ ಶಿಕ್ಷಣ ಮತ್ತು ಕ್ರೀಡಾ ವಿಕಸನದ ಜತೆಗೆ, ಯುವಜನತೆ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಿದೆ.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿಯಲ್ಲಿ 108ನೇ ಶರಕತ್ ದಿನಾಚರಣೆ; ಸೇನಾಪತಿ ಹಂಬೀರರಾವ್ ಮೊಹಿತೆ ಅವರ ಅರ್ಧಪ್ರತಿಮೆ ಅನಾವರಣ**ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಅವಧಿ ಮೀರಿದ ಲಸಿಕೆಗಳು ಪತ್ತೆ; ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ಅಸಮಾಧಾನ**ಮಾಂಜಾ ದಾರದಿಂದ ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ! ಉಪಲೋಕಾಯುಕ್ತ ಬಿ. ವೀರಪ್ಪ ಸೂಚನೆ**ವಿದ್ಯಾರ್ಥಿಗಳ ಆರೋಗ್ಯಕ್ಕೆ ಆದ್ಯತೆ! ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ರಾಗಿ ಅಂಬಳಿ ವಿತರಣೆಗಾಗಿ ಸ್ಟೀಲ್ ಲೋಟ, ಪಾತ್ರೆಗಳ ಕೊಡುಗೆ**ಬೆಳಗಾವಿಯಲ್ಲಿ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆ; ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್ ಆಯುಕ್ತರ ಸೂಚನೆ!**ಬೆಳಗಾವಿ ಎಪಿಎಂಸಿ ಸಂಡೇ ಮಾರ್ಕೆಟ್‌ನಲ್ಲಿ ಅಕ್ರಮದ ಆರೋಪ! ಬಾಡಿಗೆ, ಸೆಸ್ ವಸೂಲಿಯಲ್ಲಿ ವ್ಯತ್ಯಾಸದ ಶಂಕೆ; ಲೋಕಾಯುಕ್ತ ತನಿಖೆಗೆ ಮನವಿ**ಬೆಳಗಾವಿಯಲ್ಲಿ ರ‍್ಯಾಪಿಡೋ, ಓಲಾ, ಉಬರ್ ವಿರುದ್ಧ ಆಟೋ ಚಾಲಕರ ಆಕ್ರೋಶ; ನಿಯಮ ಉಲ್ಲಂಘನೆ ಪರಿಶೀಲನೆಗೆ ಆಗ್ರಹ!**ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ? ಸುವರ್ಣ ವಿಧಾನಸೌಧದಲ್ಲಿ ಸಿದ್ಧತೆ ಚುರುಕು!**ಬೆಳಗಾವಿಯ Scratchpad ಏಜೆನ್ಸಿಗೆ ರಾಷ್ಟ್ರೀಯ ಮಟ್ಟದ ಗೌರವ; ‘Pehnoge Toh Bachoge’ ಅಭಿಯಾನಕ್ಕೆ ಗೋಲ್ಡ್ ಮತ್ತು ಸಿಲ್ವರ್ ಪ್ರಶಸ್ತಿ!**ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯತ್ವ ನೋಂದಣಿಗೆ ಚಾಲನೆ; ಕಾರ್ಮಿಕರಿಗೆ ಉಚಿತ ಕಾನೂನು ನೆರವಿನ ಭರವಸೆ!*