LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಕೊಡುಗೆ: ಎರಡು ಚಿರತೆ, ಒಂದು ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ!

ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಕಾಳಜಿಗೆ ಆದ್ಯತೆ – 27ನೇ ಜನ್ಮದಿನವನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಆಚರಣೆ

ಬೆಳಗಾವಿ: ತಮ್ಮ 27ನೇ ಜನ್ಮದಿನವನ್ನು ಸಮಾಜಮುಖಿ ಹಾಗೂ ಪರಿಸರಪರ ಕಾಳಜಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಕರ್ನಾಟಕ ಅಪೆಕ್ಸ್ ಬ್ಯಾಂಕ್ ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಸತೀಶ್ ಜಾರಕಿಹೊಳಿ ಅವರು ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಎರಡು ಚಿರತೆಗಳು ಹಾಗೂ ಒಂದು ಸಿಂಹವನ್ನು ದತ್ತು ಪಡೆದು, ಅವುಗಳ ಆರೈಕೆ ಮತ್ತು ಪೋಷಣೆಗೆ ಮುಂದಾಗಿದ್ದಾರೆ.news_1791044319_1_908.webp

ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಉತ್ತರ ಕರ್ನಾಟಕದ ಏಕೈಕ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ವನ್ಯಜೀವಿಗಳನ್ನು ದತ್ತು ಪಡೆಯುವ ಮೂಲಕ ರಾಹುಲ್ ಜಾರಕಿಹೊಳಿ ಅವರು ತಮ್ಮ ಜನ್ಮದಿನವನ್ನು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಸಾರ್ಥಕ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ.

ಇದಕ್ಕೂ ಮುನ್ನ ಅವರ ತಂದೆ, ಶಾಸಕ ಸತೀಶ್ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿಯೂ ಇದೇ ಮೃಗಾಲಯದಲ್ಲಿ ಒಂದು ಸಿಂಹವನ್ನು ದತ್ತು ಪಡೆಯಲಾಗಿದ್ದು, ಅದರ ಆರೈಕೆ ಮತ್ತು ಪೋಷಣೆಗೆ ನೆರವು ನೀಡಲಾಗುತ್ತಿದೆ. ಈ ಮೂಲಕ ಜಾರಕಿಹೊಳಿ ಕುಟುಂಬವು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ಕಲ್ಯಾಣದ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ.news_1791044320_2_960.webp

ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿ-ಪಕ್ಷಿಗಳ ಮೇಲಿನ ಕಾಳಜಿ ಹಾಗೂ ಪ್ರಕೃತಿಯ ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಪ್ರಯತ್ನಗಳು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ವನ್ಯಜೀವಿಗಳ ಮಹತ್ವವನ್ನು ಪರಿಚಯಿಸಲು ಸಹಕಾರಿಯಾಗಲಿವೆ ಎಂಬ ಆಶಯವನ್ನು ರಾಹುಲ್ ಜಾರಕಿಹೊಳಿ ಹೊಂದಿದ್ದಾರೆ.

ಹುಟ್ಟುಹಬ್ಬದ ಸಂಭ್ರಮವನ್ನು ಕೇವಲ ವೈಯಕ್ತಿಕ ಆಚರಣೆಗೆ ಸೀಮಿತಗೊಳಿಸದೆ, ಪ್ರಕೃತಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕೊಡುಗೆ ನೀಡುವ ಮೂಲಕ ಅರ್ಥಪೂರ್ಣವಾಗಿಸಿರುವುದು ಈ ಕಾರ್ಯದ ವಿಶೇಷತೆಯಾಗಿದೆ.

Author
D Media 24
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿಯಲ್ಲಿ 108ನೇ ಶರಕತ್ ದಿನಾಚರಣೆ; ಸೇನಾಪತಿ ಹಂಬೀರರಾವ್ ಮೊಹಿತೆ ಅವರ ಅರ್ಧಪ್ರತಿಮೆ ಅನಾವರಣ**ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಅವಧಿ ಮೀರಿದ ಲಸಿಕೆಗಳು ಪತ್ತೆ; ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ಅಸಮಾಧಾನ**ಮಾಂಜಾ ದಾರದಿಂದ ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ! ಉಪಲೋಕಾಯುಕ್ತ ಬಿ. ವೀರಪ್ಪ ಸೂಚನೆ**ವಿದ್ಯಾರ್ಥಿಗಳ ಆರೋಗ್ಯಕ್ಕೆ ಆದ್ಯತೆ! ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ರಾಗಿ ಅಂಬಳಿ ವಿತರಣೆಗಾಗಿ ಸ್ಟೀಲ್ ಲೋಟ, ಪಾತ್ರೆಗಳ ಕೊಡುಗೆ**ಬೆಳಗಾವಿಯಲ್ಲಿ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆ; ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್ ಆಯುಕ್ತರ ಸೂಚನೆ!**ಬೆಳಗಾವಿ ಎಪಿಎಂಸಿ ಸಂಡೇ ಮಾರ್ಕೆಟ್‌ನಲ್ಲಿ ಅಕ್ರಮದ ಆರೋಪ! ಬಾಡಿಗೆ, ಸೆಸ್ ವಸೂಲಿಯಲ್ಲಿ ವ್ಯತ್ಯಾಸದ ಶಂಕೆ; ಲೋಕಾಯುಕ್ತ ತನಿಖೆಗೆ ಮನವಿ**ಬೆಳಗಾವಿಯಲ್ಲಿ ರ‍್ಯಾಪಿಡೋ, ಓಲಾ, ಉಬರ್ ವಿರುದ್ಧ ಆಟೋ ಚಾಲಕರ ಆಕ್ರೋಶ; ನಿಯಮ ಉಲ್ಲಂಘನೆ ಪರಿಶೀಲನೆಗೆ ಆಗ್ರಹ!**ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ? ಸುವರ್ಣ ವಿಧಾನಸೌಧದಲ್ಲಿ ಸಿದ್ಧತೆ ಚುರುಕು!**ಬೆಳಗಾವಿಯ Scratchpad ಏಜೆನ್ಸಿಗೆ ರಾಷ್ಟ್ರೀಯ ಮಟ್ಟದ ಗೌರವ; ‘Pehnoge Toh Bachoge’ ಅಭಿಯಾನಕ್ಕೆ ಗೋಲ್ಡ್ ಮತ್ತು ಸಿಲ್ವರ್ ಪ್ರಶಸ್ತಿ!**ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯತ್ವ ನೋಂದಣಿಗೆ ಚಾಲನೆ; ಕಾರ್ಮಿಕರಿಗೆ ಉಚಿತ ಕಾನೂನು ನೆರವಿನ ಭರವಸೆ!*