ಬೆಳಗಾವಿ ಮಹಾನಗರ ಪಾಲಿಕೆ ಗಣೇಶ್ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ
ಬೆಳಗಾವಿ ಮಹಾನಗರ ಪಾಲಿಕೆ ಗಣೇಶ್ ಚತುರ್ಥಿ ಉತ್ಸವವನ್ನು ಅದ್ದೂರಿ ಮತ್ತು ಪಾರಂಪರಿಕ ಹೋಗಿ ಆಚರಣೆ ಮಾಡಲಾಗುತ್ತಿದ್ದು 11 ದಿನಗಳ ಕಾಲ ಗಣಪತಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು ಪ್ರತಿದಿನ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.
ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಮತ್ತು ಸದಸ್ಯರುಗಳು ಗೌರಿ ಗಣೇಶ್ ಪೂಜಾ ವಿಧಾನಗಳಲ್ಲಿ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ
ಬೆಳಗಾವಿ ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ್ ಹನುಮಂತ ಕೊಂಗಾಲಿ ಅವರಿಂದ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿತ್ತು ಸತ್ಯನಾರಾಯಣ ಪೂಜೆಯನ್ನು ಮಹಾಪೌರ ಪ್ರೀತಿ ಕಾಮಕರ ದಂಪತಿಗಳು ನೆರವೇರಿಸಿದರು
ಈ ನಿಮಿತ್ತ ಭಜನೆ ನಾಮ ಸ್ಮರಣೆ ಮತ್ತು ಮಹಾಪ್ರಸಾದ್ ಹಮ್ಮಿಕೊಳ್ಳಲಾಗಿತ್ತು . ಪಾಲಿಕೆ ಆವರಣದಲ್ಲಿ ಮಹಾಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು ಮಹಾಪೌರ ಹಾಗೂ ಉಪಮಾಪೌರ ಹಾಗೂ ಆಯುಕ್ತರಾದ ಎನ್ ಕಾರ್ತಿಕ್ ಮಹಾಪ್ರಸಾದಕ್ಕೆ ಚಾಲನೆ ನೀಡಿದರು
ಇದೇ ಸಂದರ್ಭದಲ್ಲಿ ಪಾಲಿಕೆ ಹಿರಿಯ ಅಧಿಕಾರಿಗಳಾದ ಲಕ್ಷ್ಮಿ ನಿಪ್ಪಾನಿಕರ, ಉದಯಕುಮಾರ್, ಹಾಗೂ ಮಹಾನಗರ ಪಾಲಿಕೆ ಸದಸ್ಯರುಗಳು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗ, ಪೌರಕಾರ್ಮಿಕರು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು

