ಬೈಲಹೊಂಗಲ; ಜಗತ್ತಿಗೆ ಕಾಯಕ ತತ್ವ ಬೊಧಿಸಿದ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ರಾಜ್ಯದ ರೈಲ್ವೆ ಇಲಾಖೆಯಲ್ಲಿ ಕಾಯಕದಿನವನ್ನಾಗಿ ಆಚರಿಸಲು ಅಧಿಕಾರಿಗಳು, ಕಾರ್ಮಿಕ ವರ್ಗ ಹಾಗೂ ಸರ್ವ ಸಿಬ್ಬಂದಿ ಪಾಲ್ಗೊಂಡು ಆಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ನೈಋತ್ಯ ರೈಲ್ವೇ ವಿಭಾಗದ ಡಿ.ಆರ್.ಯು.ಸಿ.ಸಿ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದ್ದಾರೆ.
ನೈಋತ್ಯ ರೈಲ್ವೆ ವಿಭಾಗೀಯ ಕಛೇರಿ ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ 41ನೇ ಡಿ.ಆರ್.ಯು.ಸಿ.ಸಿ ಸಭೆಯಲ್ಲಿ ಮನವಿ ನೀಡಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಕನ್ನಡ ನಾಡಿನಲ್ಲಿ ಆಚರಿಸುವಾಗ ರೈಲ್ವೆ ಇಲಾಖೆಯಲ್ಲಿ ಆಚರಿಸದೆ ಇರುವದು ಅತ್ಯಂತ ದುರದೃಷ್ಟಕರ ಆದ್ದರಿಂದ ಪ್ರತಿವರ್ಷ ಮೇ ತಿಂಗಳಲ್ಲಿ ಬರುವ ಅಕ್ಷಯ ತೃತೀಯಾದಂದು ಬರುವ ಬಸವ ಜಯಂತಿ ಆಚರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಅಮೃತ ಕಾಲ ಅಡಿಯಲ್ಲಿ ರೈಲ್ವೆಇಲಾಖೆ ಶರವೇಗದಲ್ಲಿ ಅಭಿವೃದ್ಧಿಯಾಗಿದ್ದು
ಈ ಸಂದರ್ಭದಲ್ಲಿ ನನ್ನನ್ನು ಸದಸ್ಯನಾಗಿ ಆಯ್ಕೆ ಮಾಡಿ ರೈಲ್ವೇ ಬಳಕೆದಾರರ ಅಲ್ಪ ಸೇವೆಮಾಡಲು ಅನಕೂಲ ಮಾಡಿದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿ ಬಳಕೆದಾರರ ಹಿತದೃಷ್ಟಿಯಿಂದ,ಬೆಳಗಾವಿ -ಧಾರವಾಡ ನೇರ ರೈಲ್ವೇ ಕಾಮಗಾರಿಯ ಸಮಸ್ಯೆಗಳನ್ನು ಇತ್ಯಾರ್ಥಗೊಳಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭಿಸಬೇಕು.
)ಲೊಕಾಪೂರ- ರಾಮದುರ್ಗ-ಸವದತ್ತಿ ಹೊಸ ಮಾರ್ಗದ ಸರ್ವೆ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು. ಬೆಳಗಾವಿ- ಬೈಲಹೊಂಗಲ- ಸೊಗಲ-ಸವದತ್ತಿ ಮಾರ್ಗದ ಬಗ್ಗೆ ಹೊಸ ಪ್ರಸ್ತಾವಣೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತುರು ಬರುವ ಶ್ರೀಸೋಗಲ ಕ್ಷೇತ್ರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಕ್ಷೇತ್ರಗಳಾಗಿ ಹೊರಹೊಮ್ಮುವತ್ತ ಕ್ರಮ ಕೈಗೊಳ್ಳಬೇಕು.
ಹುಬ್ಬಳ್ಳಿ-ದಾದರ ಲೋಕ್ ಮಾನ್ಯ ತಿಲಕ್ Train No: 17317 & 17318 ಹಾಗೂ ಹರಿಪ್ರೀಯಾ ಎಕ್ಸ್‌ಪ್ರೆಸ್ Train No:17416&17415 ಈ ರೈಲುಗಳು ಪಾಶ್ಚಾಪೂರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನಕೂಲಕ್ಕಾಗಿ ನಿಲುಗಡೆಗೊಳಿಸಬೇಕು.
ದಿನನಿತ್ಯವಸ್ತುಗಳು, ಸರಕುಸಾಗಾಣಿಕೆ ಹಾಗೂ ಪ್ರವಾಸೊದ್ಯಮದ ಬೆಳವಣಿಗೆಗಾಗಿ ಬೆಳಗಾವಿ-ಗೋವಾ ನಡುವೆ ಮೆಮೋ/ ಪ್ರಾಸಿಂಜರ್ ರೈಲ್ವೇ ಪ್ರಾರಂಭಿಸಬೇಕು.
ಬೆಳಗಾವಿ ಸಮೀಪದ ಸೂಳೆಭಾವಿ ಹತ್ತಿರ ರೈಲ್ವೆ ಸೇತುವೆ ಸಮೀಪದ ತಡೆಗೊಡಿಯಿಂದ ರೈತರ ಜಮೀನುಗಳಿಗೆ ರಸ್ತೆಗೆ ತೊಂದರೆಯಾಗಿದ್ದು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು.
ಬೆಳಗಾವಿ-ಬೆಂಗಳೂರ ವಂದೇ ಭಾರತ ರೈಲನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಬೆಳಿಗ್ಗೆ 7 ಘಂಟೆಗೆ ಪ್ರಾರಂಭಿಸಬೇಕು, ರಾತ್ರಿ ಹೊರಡುವ ಬೆಳಗಾವಿ- ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಪ್ಲಾಟ್ ಫಾರಂ 1ರಲ್ಲಿ ನಿಲ್ಲಲು ಸೂಚಿಸಬೇಕು.
ಧಾರವಾಡದಲ್ಲಿ ನಿರ್ಮಾಣವಾಗಿರುವ ನಿಲ್ದಾಣದ ಕಳಪೆ ಕಾಮಗಾರಿ ಪರೀಶಿಲಿಸಬೇಕು ರೈಲಿನಲ್ಲಿ ಸಿಬ್ಬಂದಿ ಪ್ರಯಾಣಿಕರ ಜೋತೆ ಸೌಹಾರ್ದವಾಗಿ ನಡೆದುಕೊಳ್ಳಲು ಕ್ರಮ ವಹಿಸುವಂತೆ ಸೂಚಿಸಿದರು. ಇದಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಈ ಕುರಿತು ಮನವಿಯನ್ನು ವಿಭಾಗೀಯ ರೈಲ್ವೆ ಅಧಿಕಾರಿಗಳಿಗೆ ನೀಡಿದರು. ಈ ಸಭೆಯಲ್ಲಿ ವಿಭಾಗಿಯ ಅಧಿಕಾರಿಗಳು, ರೈಲ್ವೆ ನಿರ್ದೇಶಕರು ಉಪಸ್ಥಿತರಿದ್ದರು.









